ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಜಾರಿಯಾಗಿದ್ದ ಲಾಕ್‍ಡೌನ್ ಕುರಿತು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಆ. 1ರಿಂದ ಅನ್‍ಲಾಕ್ 3.0 ನಿಯಮಗಳು ಜಾರಿಯಾಗಲಿದೆ.
ಇದುವರೆಗೆ ಹೇರಲಾಗಿದ್ದ ರಾತ್ರಿ ಕಫ್ರ್ಯೂ ರದ್ದು ಮಾಡಲಗಿದೆ. ಆ. 31ರ ವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ ಎಂದು ಸೂಚಿಸಿದೆ. ಆಗಸ್ಟ್ 5ರಿಂದ ಯೋಗ, ಜಿಮ್, ಸ್ವಿಮ್ಮಿಂಗ್ ಪೂಲ್ ನಡೆಸಲು ಅವಕಾಶ ನೀಡಲಾಗುತ್ತಿದೆ.. ಸಿನಿಮಾ ಮಂದಿರ, ಪಾರ್ಕ್ ತೆರೆಯಲು, ಬಾರ್ & ರೆಸ್ಟೋರೆಂಟ್‍ಗೆ ಅವಕಾಶ ನೀಡಲಾಗಿದೆ.
ಕಂಟೈನ್‍ಮೆಂಟ್ ಜೋನ್ ಹೊರತಾದ ಪ್ರದೇಶದಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಸಾಮಾಜಿಕ ರಾಜಕೀಯ, ಶೈಕ್ಷಣಿಕ-ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಸ ನೀಡಲಾಗಿದೆ. ಕಂಟೈನ್‍ಮೆಂಟ್ ಪ್ರದೇಶದಲ್ಲಿ ಆಗಸ್ಟ್ 31ರ ವರೆಗೂ ಲಾಕ್‍ಡೌನ್ ಮಂದುವರೆಯಲಿದ್ದು, ಮೂಲಭೂತ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 65 ವರ್ಷ ಮೇಲ್ಪಟ್ಟ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ಅವಶ್ಯಕ ಕೆಲಸಗಳಿಗೆ ಮಾತ್ರ ಹೊರಹೋಗಬೇಕು.
ಇನ್ನು ಮುಂದೆ ಭಾರತ್ ಮಿಷನ್ ಅಡಿ ಸೀಮಿತ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಈ ಹಿಂದೆ ತಿಳಿಸಿದಂತೆ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಆರೋಗ್ಯ ಸೇತು ಬಳಕೆ ಮುಂದುವರೆಸುವಂತೆ ತಿಳಿಸಲಾಗಿದೆ.










