ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ-ಗಣ್ಯರಿಂದ ಗೌರವ ಸಮರ್ಪಣೆ…

215
firstsuddi

ನವದೆಹಲಿ : ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79 ವರ್ಷದ ಜನ್ಮ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ನಾಯಕರು ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಜಿ ಅವರ ಜನ್ಮ ದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಂದೆಯನ್ನು ಭಾವನಾತ್ಮಕವಾಗಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಜೀವ್ ಗಾಂಧಿ ಅವರ ಕಾಲಕ್ಕಿಂತ ಬಹಳ ಮುಂದಿರುವ ಪ್ರಚಂಡ ದೃಷ್ಟಿ ಹೊಂದಿದ್ದ ವ್ಯಕ್ತಿ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಹಾನುಭೂತಿ ಮತ್ತು ಪ್ರೀತಿಯ ಮನುಷ್ಯರಾಗಿದ್ದರು. ನಾನು ಅವರನ್ನು ನನ್ನ ತಂದೆಯಾಗಿ ಹೊಂದಲು ನಂಬಲಾಗದಷ್ಟು ಅದೃಷ್ಟ ಪಡೆದಿದ್ದೇವೆ. ನಾವು ಅವರನ್ನು ಇಂದು ಮತ್ತು ಪ್ರತಿದಿನ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಪುರೋಗಾಮಿ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದ, ನಮಗೆಲ್ಲ ಅಭಿವೃದ್ದಿಯ ದಾರಿ ತೋರಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಹುಟ್ಟುಹಬ್ಬದ ದಿನದ ಗೌರವಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.