ಬಣಕಲ್ : ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್‍ನಲ್ಲಿ ನಡು ರಸ್ತೆ ಹಾಗೂ ಅರಣ್ಯ ಪ್ರದೇಶದಲ್ಲಿ ಪ್ರಿ ವೆಡ್ಡಿಂಗ್ ವೀಡೀಯೋ ಶೂಟ್ ಮಾಡುತ್ತಿರುವುದು ಮಂಗಳವಾರ ಕಂಡು ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದಾ ವಾಹನಗಳ ಓಡಾಟ ಇರುವ ಹಾಗೂ ಕಡಿದಾದ ತಿರುವಿನಿಂದ ಕೂಡಿರುವ ಚಾರ್ಮಾಡಿ ಘಾಟ್ ಹೆದ್ದಾರಿ ಹಾಗೂ ಆಸುಪಾಸಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ನವಜೋಡಿಯೊಂದು ಫೋಟೋ ಶೂಟ್‍ನಲ್ಲಿ ತೊಡಗಿದ್ದು ನಾನಾ ಭಂಗಿಗಳಲ್ಲಿ ರಸ್ತೆ ಮದ್ಯದಲ್ಲಿ ತೊಡಗಿತ್ತು. ರಸ್ತೆಯಲ್ಲಿ ಬರುವ ವಾಹನ ಸವಾರರು ತಿರುವಿನಲ್ಲಿ ಅಚಾನಕ್ಕಾಗಿ ರಸ್ತೆಯ ಮದ್ಯದಲ್ಲಿ ಎದುರಾಗುವ ಜನರನ್ನು ನೋಡಿ ಗಾಬರಿಗೊಂಡು ವಾಹನ ನಿಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದಿಂದ ಚಾರ್ಮಾಡಿ ಘಾಟ್‍ನಲ್ಲಿ ಪೋಟೋ ತೆಗೆಯದಂತೆ ಸೂಚನಾ ಫಲಕ ಹಾಕಿದ್ದರೂ ಕೂಡ ಕೆಲ ಪ್ರವಾಸಿಗರು ಪೋಟೊ ವೀಡಿಯೋ ತೆಗೆಯುತ್ತಿರುವುದು ಹೆಚ್ಚುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಅಂತಹವರಿಗೆ ದಂಡ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಚಾರ್ಮಾಡಿ ಘಾಟ್ ನಡುರಸ್ತೆಯಲ್ಲಿ ನವಜೋಡಿಯಿಂದ ಪ್ರೀ ವೆಡ್ಡಿಂಗ್ ಫೋಟೋ ಶೂಟ್-ಸಾರ್ವಜನಿಕರ ಆಕ್ರೋಶ…









