ನವಜಾತ ಹೆಣ್ಣು ಶಿಶುವನ್ನು ಜಮೀನಿನಲ್ಲಿ ಎಸೆದುಹೋದ ಕ್ರೂರಿ ತಾಯಿ…

146
firstsuddi

ರಾಯಚೂರು : ಕ್ರೂರಿ ತಾಯಿಯೊಬ್ಬರು ನವಜಾತ ಹೆಣ್ಣು ಶಿಶುವನ್ನು ಜಮೀನೊಂದರಲ್ಲಿ ಎಸೆದು ಹೋಗಿರುವ ಮನಕಲುಕುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುಮಾರಗೌಡ ಎಂಬುವವರ ಜಮೀನಿನಲ್ಲಿ ಹೆಣ್ಣು ಶಿಶುವನ್ನು ಎಸೆದು ಹೋಗಿದ್ದು, ಮಗು ಅಳುತ್ತಿದ್ದ ಶಬ್ಧ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಶಿಶುವನ್ನು ರಕ್ಷಿಸಿ ಲಿಂಗಸುಗೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.