ಚೀನಾ ಮೂಲದ ಪಬ್‍ಜಿ ಗೇಮ್ ಸೇರಿದಂತೆ 118 ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ…

143
firstsuddi

ನವದೆಹಲಿ : ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾದ ಆ್ಯಪ್ ಗಳನ್ನು ನಿಷೇದಿಸುತ್ತಲೇ ಬಂದಿದ್ದು, ಇದೀಗ ಮತ್ತೆ ಕೇಂದ್ರ ಸರ್ಕಾರ ಪಬ್‍ಜಿ ಗೇಮ್ ಸೇರಿದಂತೆ ಚೀನಾ ಮೂಲದ 118 ಆ್ಯಪ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಗಾಲ್ವಾನ್ ಸಂಘರ್ಷದ  ಬಳಿಕ ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್ ಗಳನ್ನು ಭಾರತ ನಿಷೇಧಿಸಿತ್ತು. ಬಳಿಕ ಮತ್ತೆ 47 ಆ್ಯಪ್ ಗಳನ್ನು ನಿಷೇಧಿಸಿತ್ತು.