ಶಾಲಾ ಮಕ್ಕಳು ಸೇವಿಸುವ ಐಸ್‍ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್ ಬೆರೆಸಲಾಗುತ್ತಿದೆ : ಸಚಿವ ಸುರೇಶ್ ಕುಮಾರ್ ಸ್ಪೋಟಕ ಹೇಳಿಕೆ…

117
firstsuddi

ಚಾಮರಾಜನಗರ : ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಮಕ್ಕಳನ್ನು ಸೆಳೆಯಲು ವಿದ್ಯಾರ್ಥಿಗಳಿಗೆ ಐಸ್‍ಕ್ರೀಂನಲ್ಲಿ ಡ್ರಗ್ಸ್ ಬೆರೆಸಲಾಗುತ್ತಿದೆ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳನ್ನು ಸೆಳೆಯಲು ತಿನ್ನುವ ಐಸ್‍ಕ್ರೀಂ, ಹಣ್ಣುಗಳು ಹಾಗೂ ಚಾಕಲೇಟ್‍ಗಳಿಗೆ ಡ್ರಗ್ಸ್ ಬೆರೆಸಿ ಕೊಡಲಾಗುತ್ತಿದೆ. ಇದರಿಂದ ಮಕ್ಕಳು ಡ್ರಗ್ಸ್ ಗೆ ಅಡಿಕ್ಟ್ ಆಗುತ್ತಾರೆ ಎಂಬ ಆತಂಕ ಹೆಚ್ಚಿದೆ. ಯುವ ಜನತೆಯನ್ನು ಇಂತಹ ಹವ್ಯಾಸಕ್ಕೆ ತಳ್ಳುವವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ ಎಂದರು.