ಅಮ್ಮ- ಅಣ್ಣ ತನ್ನ ಹುಟ್ಟುಹಬ್ಬಕ್ಕೆ ಶುಭಕೋರಲಿಲ್ಲ ಎಂದು ಮನನೊಂದು ಯುವತಿ ನೇಣಿಗೆ ಶರಣು…

208
firstsuddi

ಹೈದರಾಬಾದ್ : ಅಮ್ಮ ಮತ್ತು ಅಣ್ಣ ಹುಟ್ಟುಹಬ್ಬಕ್ಕೆ ಶುಭಕೋರಲಿಲ್ಲ ಎಂದು ಮನನೊಂದು ಯುವತಿ ತನ್ನ ಹುಟ್ಟುಹಬ್ಬದ ದಿನವೇ ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೌರ್ಯ ನೈನಾ(18) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ನಿನ್ನೆ ಮೃತ ಯುವತಿಯ ಹುಟ್ಟುಹಬ್ಬವಿತ್ತು. ಯುವತಿಯ ತಾಯಿ ಹಾಗೂ ಅಣ್ಣ ಯುವತಿಗೆ ಸರ್ಪ್ರೈಸ್ ನೀಡಬೇಕೆಂದು ಯುವತಿಗೆ ಬೆಳಿಗ್ಗೆ ಹುಟ್ಟುಹಬ್ಬದ ಶುಭ ಕೋರದೆ ಕೆಲಸಕ್ಕೆ ತೆರಳಿದ್ದರು. ಇದರಿಂದ ಮನನೊಂದ ಯುವತಿ ತಾಯಿ ಹಾಗೂ ಅಣ್ಣನಿಗೆ ತನ್ನ ಮೇಲೆ ಪ್ರೀತಿ ಇಲ್ಲ. ಅವರು ನನ್ನ ಹುಟ್ಟುಹಬ್ಬಕ್ಕೆ ಶುಭಕೋರಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೆ ಕೆಲಸ ಮುಗಿಸಿಕೊಂಡು ಇಬ್ಬರು ಮನೆಗೆ ಬಂದು ನೋಡಿದಾಗ ಯುವತಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.