ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್.

147

ಉಡುಪಿ:  ಡ್ರಗ್ಸ್  ಹಗರಣಗಳು, ಡಿ.ಜೆ.ಹಳ್ಳಿ ಪ್ರಕರಣ,ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ದೂರಿದರು.

ಇಂದು ಉಡುಪಿಗೆ ಭೇಟಿ ನೀಡಿದ ಇವರು ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿ ಸಾಂಕ್ರಾಮಿಕ ಕೊರೋನ ಚಿಕಿತ್ಸೆ ವಿಚಾರದಲ್ಲಿ ದೊಡ್ಡ ಹಗರಣ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿಜೆಹಳ್ಳಿ, ಕೆ ಜೆ ಹಳ್ಳಿ, ಮತ್ತು ಡ್ರಗ್ಸ್ ಜಾಲದ ಕಾರ್ಯಾಚರಣೆ ಇದಕ್ಕೆ ಸಾಕ್ಷಿ ಡ್ರಗ್ಸ್ ಬೆಳವಣಿಗೆಯನ್ನು ಚರ್ಚೆಗೆ ತಂದು ಉಳಿದೆಲ್ಲಾ ವೈಫಲ್ಯ ಮರೆ ಮಾಚಿಸುವ ಯತ್ನ ನಡೆಯುತ್ತಿದೆ. ದಿಕ್ಕು ತಪ್ಪಿಸುವ ಯತ್ನದಲ್ಲಿ ರಾಜ್ಯ ಸರಕಾರದ ತಲ್ಲೀನ ಆಗಿದೆ. ಸಿಟಿ ರವಿಗೆ ಯಾರಿಂದ ಒತ್ತಡ ಇದೆ ಹೇಳಲಿ. ನೀವು ಸಿಎಂ ಅಲ್ಲ, ಗೃಹ ಸಚಿವ ಕೂಡಾ ಅಲ್ಲ. ಕಾಂಗ್ರೆಸ್ ಒತ್ತಡ ಯಾವತ್ತೂ ಹೇರಲ್ಲ. ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದೆ ತನಿಖೆ ಮಾಡಿ. ತನಿಖೆಗೆ ಬೆಂಬಲ ಕೊಡುತ್ತೇವೆ. ಕೇವಲ ಹೇಳಿಕೆಯಿಂದ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲ. ರಾಗಿಣಿ ಬಿಜೆಪಿಯ ಕಾರ್ಯಕರ್ತೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ನೆರೆ ಹಾವಳಿ ಪರಿಹಾರ ಬಂದಿಲ್ಲ. ನಮ್ಮ ರಾಜ್ಯದ ಎಂಪಿಗಳು ಇಲ್ಲಿ ಹುಲಿಯಂತೆ ವರ್ತಿಸುತ್ತೀರಿ. ಮೋದಿ ಮುಂದೆ ಬೆಕ್ಕಿನ ನಿಲ್ಲುತ್ತೀರಿ. ಮೊದಲು ಮಾತನಾಡಲು ಕಲಿಯಿರಿ. ರಾಜ್ಯದ ಹಿತಾಸಕ್ತಿ ಕಾಪಾಡಿ ಪಲಾಯನ ವಾದ ಮಾಡುದರಲ್ಲಿ ಕಾಲ ಕಳೆಯಬೇಡಿ ಎಂದರು.
 ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಪಾಧ್ಯಕ್ಷರಾದ ಮಂಜುನಾಥ ಭಂಡಾರಿ, ನಾಯಕರಾದ ಎಮ್ ಎ ಗಫೂರ್, ವೆರೋನಿಕಾ ಕರ್ನೆಲಿಯೊ, ಕಳ್ಳಿಗೆ ತಾರನಾಥ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು