ಮೂಡಿಗೆರೆ :ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ.

437

ಮೂಡಿಗೆರೆ : ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ದೀನದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು .

ಬಿಜೆಪಿ ತಾಲೂಕು ಅಧ್ಯಕ್ಷ ಜನ್ನಪುರ ರಘು,ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಕೊಟ್ಟಿಗೆಹಾರ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ. ರತನ್ ಕುಮಾರ್, ಬಿಜೆಪಿ ಮುಖಂಡರಾದ ಕಣಚೂರು ವಿನೋದ್ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

ತಾಲೂಕಿನ ಯುವ ಮೋರ್ಚಾ ಕಾರ್ಯಕರ್ತರು ಸಕ್ರಿಯವಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ 100 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಮನೋಜ್ ಕುಮಾರ್, ಯುವ ಮೋರ್ಚಾ ಕಾರ್ಯದರ್ಶಿ ಬಾಲು ಶೆಟ್ಟಿ, ರಕ್ಷಿತ್, ಜಿಲ್ಲಾ ಉಪಾಧ್ಯಕ್ಷರಾದ ಸರೋಜ ಸುರೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಭಾರತಿ ರವೀಂದ್ರ, ಗಜೇಂದ್ರ ಕೊಟ್ಟಿಗೆಹಾರ, ಹಾಲೂರು ಪಂಚಾಕ್ಷರಿ, ಶಶಿಧರ್ ಜವಳಿ, ಬಿಜೆಪಿ ಯುವ ಮುಖಂಡರಾದ ಜವಳಿ ಪರೀಕ್ಷಿತ್,  ಅವಿನಾಶ್ ಜನಾಪುರ, ಸುನಿಲ್, ಸಂತೋಷ್ ಕುಂಬಾರಡಿ,  ಶರತ್ ಫಲ್ಗುಣಿ, ಅಭಿಲಾಷ್ ಅತ್ತಿಗೆರೆ, ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.