ಮುಂಬೈ : ಟಾಲಿವುಡ್ ನಟಿ ಕಾಜಲ್ ಅಗವಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ ತಿಂಗಳ 30ರಂದು ಡಿಸರ್ನ್ ಲಿವಿಂಗ್ ಸ್ಥಾಪಕ ಹಾಗೂ ಇಂಟಿರೀಯರ್ ಡಿಸೈನರ್ ಗೌತಮ್ ಕಿಟ್ಟು ಎಂಬುವವರನ್ನು ವರಿಸುತ್ತಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಅವರು ಮದುವೆ ಆಗುತ್ತಿರುವ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಟ್ಚು ಅವರನ್ನು ಮುಂಬೈನಲ್ಲಿ ವಿವಾಹವಾಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಹಾಗೂ ಆಪ್ತರನ್ನು ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಇಷ್ಟು ದಿನ ನೀವು ನನಗೆ ನೀಡಿದ ಪ್ರೀತಿಗೆ ಅಭಾರಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನ್ನು ರಂಜಿಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.










