ಕೊಟ್ಟಿಗೆಹಾರ : ಮಲೆನಾಡು ರೈತರಿಗೆ ಸಹಕಾರ ಬ್ಯಾಂಕ್‍ನಿಂದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ ಮೂಡಿಗೆರೆ ತಾಲ್ಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾದ ಹಳಸೆ ಶಿವಣ್ಣ ಅವರಿಗೆ ಬಣಕಲ್ ಸಹಕಾರ ಬ್ಯಾಂಕ್‍ನಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೆನಾಡಿನ ರೈತರು ಸಹಕಾರ ಬ್ಯಾಂಕ್‍ನೊಂದಿಗೆ ಸದಾ ಸಂಪರ್ಕದಲ್ಲಿದ್ದು ಆರ್ಥಿಕ ನೆರವು ಪಡೆದು ಅಭಿವೃದ್ದಿ ಹೊಂದಬೇಕು. ತಾಲ್ಲೂಕಿನ ಎಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಹೊಸ ಸಾಲ ಹಾಗೂ ಹೆಚ್ಚುವರಿ ಸಾಲ ನೀಡಲಾಗುವುದು. ಪಾರಂ ನಂ 53 ಅಡಿಯಲ್ಲಿ ಬರುವ ರೈತರಿಗೆ ಸಾಲ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಬಣಕಲ್ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಎಂ ಭರತ್ ಮಾತನಾಡಿ ರೈತರ ಸಮಗ್ರ ಅಭಿವೃದ್ದಿಗೆ ಸಹಕಾರ ಬ್ಯಾಂಕ್ ಸದಾ ಸಿದ್ದವಾಗಿದ್ದು ಹಲವಾರು ಸೌಲಭ್ಯಗಳನ್ನು ರೈತರ ಏಳಿಗೆಗಾಗಿ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ ಭರತ್, ಉಪಾಧ್ಯಕ್ಷ ರಂಗನಾಥ್, ನಿರ್ದೇಶಕರಾದ ಕಲ್ಲೇಶ್, ಅಭಿಲಾಷ್, ಗಜೇಂದ್ರ, ವಿಕ್ರಮ್, ಶಾಮಣ್ಣ ಬಣಕಲ್, ಲಕ್ಷ್ಮಿ, ದಿಲ್‍ದಾರ್ ಬೇಗಂ, ಮಮತಾ, ಚಂದ್ರಶೇಖರ್, ರಮೇಶ್, ವೃತ್ತಿಪರ ನಿರ್ದೇಶಕರಾದ ನಾರಾಯಣಗೌಡ, ಪ್ರದೀಪ್‍ಕುಮಾರ್, ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರಶೇಖರ್ ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಮಲೆನಾಡು ರೈತರಿಗೆ ಸಹಕಾರ ಬ್ಯಾಂಕ್‍ನಿಂದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ :...










