ನಾಗ್ಪುರ : ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ದಾಳಿ ಸಂಭವಿಸಿದ್ದು, ದಾಳಿಯಲ್ಲಿ ಐವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಕೋಸ್ಮಿ-ಕಿನ್ಸೇಲಿ ಅಎಣ್ಯ ಪ್ರದೇಶದಲ್ಲಿ ಗಡಚಿರೋಲಿ ಪೊಲೀಸ್ ಪಡೆಯ ಸಿ-60 ಕಮಾಂಡೋಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಲೆ ಪೊಲೀಸರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ದಾಳಿ ನಡೆಸಿ ನಾಲ್ವರು ಮಹಿಳಾ ನಕ್ಸಲರು ಸೇರಿದಂತೆ ಐವರು ನಕ್ಸಲರನ್ನು ಹೊಡೆದುರುಳಿಸಿದ್ದು, ನಕ್ಸಲರ ಬಳಿ ಇದ್ದ ಇನ್ಸಾಸ್ ರೈಫಲ್ ಸೇರಿದಂತೆ ಐದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.










