ಕಳಸ : ಜಲಪಾತ ವೀಕ್ಷಣೆಗೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು…

328
firstsuddi

ಕಳಸ : ಜಲಪಾತ ವೀಕ್ಷಣೆಗೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಅಬ್ಬುಗುಡಿಗೆ ಸುರುಮನೆ ಜಲಪಾತದಲ್ಲಿ ನಡೆದಿದೆ. ಸಂಸೆ ಸಮೀಪದ ಗುತ್ಯಡ್ಕ ನಿವಾಸಿ ವಂಶಿತ್(16) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಮೃತ ಬಾಲಕ ಇಂದು ಮದ್ಯಾಹ್ನ ತನ್ನ ನಾಲ್ಕು ಜನ ಸ್ನೇಹಿತರ ಜೊತೆ ಸುರುಮನೆ ಫಾಲ್ಸ್ ನೋಡಲು ಆಗಮಿಸಿದ್ದಾರೆ. ಸ್ನಾನ ಮಾಡಲು ನೀರಿನಲ್ಲಿ ಇಳಿದಾಗ ನೀರಿನಲ್ಲಿ ಮುಳುಗಿದ್ದು, ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪ್ರವಾಸಿಗರು ಸ್ಥಳದಲ್ಲಿದ್ದರು. ಸಹಾಯಕ್ಕಾಗಿ ಅಂಗಲಾಚಿದರೂ ಯಾರೊಬ್ಬರೂ ನೆರವಿಗೆ ಬಂದಿರಲಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.
ಬಳಿಕ ಸ್ಥಳಿಯರಾದ ದಿನೇಶ್, ರಾಜೇಶ್, ಮಧು, ಪ್ರಕಾಶ್ ಕುಮಾರ್ ಅವರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ.