ಅಳಿಯನಿಂದಲೇ ಬರ್ಬರವಾಗಿ ಹತ್ಯೆಯಾದ ಅತ್ತೆ…

148
firstsuddi

ಕಲಬುರಗಿ : ಕ್ಷುಲ್ಲಕ ಕಾರಣಕ್ಕೆ ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭಿಮನಾಳ ಗ್ರಾಮದಲ್ಲಿ ನಡೆದಿದೆ. ಲಕ್ಷಿಬಾಯಿ(45) ಕೊಲೆಯಾದ ಅತ್ತೆ ಎಂದು ಗುರುತಿಸಲಾಗಿದೆ. ಲಕ್ಷ್ಮಿಬಾಯಿ ಅವರ ಮಗಳು ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದರು. ಇದರಿಂದ ಮಗಳನ್ನು ಭಾಲ್ಕಿಯಿಂದ ಭಿಮನಾಳ ಗ್ರಾಮದ ಅಳಿಯನ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗಳ ವಿಚಾರವಾಗಿ ಅತ್ತೆ ಹಾಗೂ ಅಳಿಯನ ನಡುವೆ ಜಗಳವಾಗಿದ್ದು, ಜಗಳ ತಾರಕಕ್ಕೇರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.