ದೆಹಲಿಯಲ್ಲಿ ಭೀಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಬಂಧನ…

107
firstsuddi

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ದಾಳಿ ನಡೆಸಲು ಮುಂದಾಗಿದ್ದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರನ್ನು ಲತೀಫ್(22) ಹಾಗೂ ಮೊಹಮ್ಮದ್ ಅಶ್ರಫ್ ಖತಾನಾ(20) ಎಂದು ಗುರುತಿಸಲಾಗಿದೆ. ಇಬ್ಬರು ಉಗ್ರರು ಜಮ್ಮು ಕಾಶ್ಮೀರಾದ ನಿವಾಸಿಗಳಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸಲು ಸಂಚು ರೂಪಿಸಿದ್ದರು. ಮಾಹಿತಿ ತಿಳಿದ ಪೊಲೀಸರು ನಿನ್ನೆ ರಾತ್ರಿ 10:15ರ ಸುಮಾರಿಗೆ ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದ ಬಳಿ ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸಿದ್ದು, ಉಗ್ರರ ಬಳಿ ಇದ್ದ ಅರೆ-ಸ್ವಯಂಚಾಲಿತ ಪಿಸ್ತೂಲುಗಳು ಹಾಗೂ 10 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.