ಮೂಡಿಗೆರೆ : ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮ ಗ್ರಾಮದ ಪ್ರತಿಮನೆಗಳಿಗೆ ತಲುಪಿಸಬೇಕಿದೆ : ಎಂ.ಪಿ ಕುಮಾರಸ್ವಾಮಿ.

479
firstsuddi

ಕೊಟ್ಟಿಗೆಹಾರ : ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮ ಗ್ರಾಮದ ಪ್ರತಿಮನೆಗಳಿಗೆ ತಲುಪಿಸಬೇಕಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕು ಹಾಗೂ ಬಣಕಲ್ ಬಿಜೆಪಿ ಮಂಡಲದ ವತಿಯಿಂದ ಭಾರತಿಬೈಲ್‍ನಲ್ಲಿ ನಡೆದ ನೂತನ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದು ಗ್ರಾಮೀಣ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ಪಕ್ಷದ ಬಲವರ್ದನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮ ಅಪಾರವಾಗಿದೆ. ಕಾರ್ಯಕರ್ತನ ಪರಿಶ್ರಮದಿಂದ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು ಅವರು ಮಾತನಾಡಿ ಭಯೋತ್ಫಾಧನೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ಮೋದಿಯವರ ಕಾರ್ಯಗಳು ಗಡಿಯಲ್ಲಿರುವ ಸೈನಿಕರಿಗೆ ಆತ್ಮಸ್ತೈರ್ಯವನ್ನು ತುಂಬುತ್ತವೆ. ಕಾಂಗ್ರೇಸ್ ತನ್ನ ಅಧಿಕಾರಾವಧಿಯಲ್ಲಿ ಹಗರಣದಲ್ಲಿ ತೊಡಗಿ ಲಕ್ಷಾಂತರ ರೂ ಅವ್ಯವಹಾರ ಮಾಡಿದೆ ಎಂದರು.
ತಾ.ಪಂ ಮಾಜಿ ಅಧ್ಯಕ್ಷ ಕೆ.ಸಿ ರತನ್ ಮಾತನಾಡಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸೋಣ. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಂಘಟಿತರಾಗಿ ಶ್ರಮಿಸೋಣ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಅನುಕುಮಾರ್ ಅವರು ಮಾತನಾಡಿ ಜನರ ನಿರೀಕ್ಷೆಯನ್ನು ಸಫಲಗೊಳಿಸುವುದೆ ಮುಖ್ಯ ಕಾರ್ಯವಾಗಿದೆ. ನನಗೆ ಸಿಕ್ಕ ಈ ಅಧಿಕಾರವಧಿಯಲ್ಲಿ ಸಮಾಜದ ಅಭಿವೃದ್ದಿಗೆ ಶ್ರಮಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರವೂ ಇರಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಟಿ.ಎಂ ಗಜೇಂದ್ರ, ಶಶಿಧರ್, ದೀಪಕ್ ದೊಡ್ಡಯ್ಯ, ಬಿ.ಎಸ್.ವಿಕ್ರಂ, ರಮೇಶ್ ಗುಡ್ಡಟ್ಟಿ, ಸಂಜಯ್ ಕೊಟ್ಟಿಗೆಹಾರ, ರತೀಶ್, ಸತೀಶ್, ದೇವರಾಜ್, ರಘು, ಶಾಮಣ್ಣ ಬಣಕಲ್, ಪೃಥ್ವಿ, ಪ್ರಮೀಳಾ ಮಂಜಯ್ಯ, ಪಂಚಾಕ್ಷರಿ, ಶಾಂತಲಾ ನಾಗೇಶ್, ಜಯಪಾಲ್, ಯೋಗೇಶ್, ಸತೀಶ್ ಮತ್ತಿಕಟ್ಟೆ, ಶರತ್ ಹೊಸಳ್ಳಿ, ರವಿಗೌಡ, ಗಿರೀಶ್, ಅಭಿಲಾಷ್, ಶರತ್ ಫಲ್ಗುಣಿ, ಸಾಗರ್, ನಂದನ್, ರಘುಪತಿ, ಕಲ್ಲೇಶ್, ಯತೀಶ್, ಪ್ರಸನ್ನ, ಮುಂತಾದವರು ಇದ್ದರು.