ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆ…

112
firstsuddi

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ದುರಂತಕ್ಕೀಡಾಗಿ ಮಗುಚಿ ಬಿದ್ದ 6 ಮಂದಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಪಶ್ಚಿಮ ಭಾಗದಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ ಆಳಸಮುದ್ರ ಮೀನುಗಾರಿಕೆಗೆ ಪ್ರಶಾಂತ್ ಕುಳಾಯಿ ಮಾಲೀಕತ್ವದ ಶ್ರೀ ರಕ್ಷಾ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ರಾತ್ರಿ ವೇಳೆ ದಕ್ಕೆಗೆ ಮರುಳುತ್ತಿದ್ದ ವೇಳೆ ಸುಮಾರು 10 ನಾಟಿಕಲ್ ದೂರದಲ್ಲಿ ಬೋಟ್ ಗೆ ಏನೋ ಡಿಕ್ಕಿ ಹೊಡೆದಂತಾಗಿ ಗಾಳಿಯ ರಭಸಕ್ಕೆ ಬೋಟ್ ಮಗುಚಿ ಬಿದ್ದಿದ್ದು, ಪರಿಣಾಮ ಬೋಟ್ ನಲ್ಲಿದ್ದ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಬೋಟ್ ಚಾಲಕ ಸೇರಿದಂತೆ 19 ಮಂದಿ ಚಿಕ್ಕ ದೋಣಿಯ ರಕ್ಷಣೆ ಪಡೆದು ಉಳಿದ ಬೋಟ್ನವರ ಬಳಿ ಸಹಾಯಯಾಚಿಸುತ್ತಿದ್ದರು. ಇದನ್ನು ದೂರದಲ್ಲಿದ್ದ ಬೋಟ್ ಅವರು ಗಮನಿಸಿ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ 19 ಮಂದಿಯನ್ನು ರಕ್ಷಣೆ ಮಾಡಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ನಾಪತ್ತೆಯಾದ 6 ಮಂದಿಗೆ ಕರಾವಳಿ ರಕ್ಷಣಾ ಪಡೆ ಶೋಧಕಾರ್ಯ ನಡೆಸುತ್ತಿದೆ.