ಮೂಡಿಗೆರೆ : ಕೃಷಿ ಇಲಾಖೆ ವತಿಯಿಂದ ಯುವಕರಿಗೆ ಮತ್ತು ಕೃಷಿಕರಿಗೆ ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ…

522
firstsuddi

ಮೂಡಿಗೆರೆ : ಕೃಷಿ ಇಲಾಖೆ ವತಿಯಿಂದ ಯುವಕರಿಗೆ ಮತ್ತು ಕೃಷಿಕರಿಗೆ ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಣುಬೆ, ಜೇನು ಸಾಕಾಣಿಕೆ ಹಾಗೂ ಔಷಧಿ ಸಸ್ಯ ಬೆಳೆಗಳ ಬಗ್ಗೆ ತೊಟಗಾರಿಕಾ ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕಿ ಭೂಮಿಕಾ ಅವರು ರೈತರಿಗೆ ಮಾಹಿತಿ ನೀಡಿದರು. ಡಾ|| ನಾರಾಯಣ್ ಅವರು ಮಾತನಾಡಿ, ಸಾವಯವ ಕೃಷಿಯಲ್ಲಿ ಎರೆಹುಳುವಿನ ಮಹತ್ವ ಹಾಗೂ ಸಮಗ್ರ ಕೃಷಿ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಕೆ. ರಮೇಶ್ ವಹಿಸಿದ್ದು, ನಮ್ಮ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ನಡೆದಿದ್ದು, ತುಂಬಾ ಸಂತಸ ತಂದಿದೆ. ನಮ್ಮ ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಉಷಾ ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮದ ಕೃಷಿಕರಾದ ಅಣ್ಣಪ್ಪ ಗೌಡ, ವಿಜಯೇಂದ್ರ, ಬ್ರಿಜೇಶ್ ಕಡಿದಾಳ್, ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮವನ್ನು ಗೀತಾ ನಿರೂಪಿಸಿದರು.