ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ನ ಸಿಇಓ ಆಗಿ ಮಾಳವಿಕಾ ಹೆಗ್ಡೆ ನೇಮಕ…

192
firstsuddi

ಬೆಂಗಳೂರು : ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ನ ನೂತನ ಕಾರ್ಯನಿರ್ವಾಹಕ ಅಧಿಕರಿಯಾಗಿ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಧರ್ಮಪತ್ನಿ ಮಾಳವಿಕ ಹೆಗ್ಡೆ ಅವರು ನೇಮಕಗೊಂಡಿದ್ದಾರೆ. ದೇಶಾದ್ಯಂತ ಇರುವ ಕಾಫಿ ಡೇ ಮಾಲೀಕತ್ವ ಸಿಡಿಇಎಲ್ ನೋಡಿಕೊಳ್ಳುತ್ತಿದ್ದು, ಕಾಫಿ ಡೇ ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕ ಹೆಗ್ಡೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ. ಸಿದ್ದಾರ್ಥ್ ಹೆಗ್ಡೆ ಅವರು ವಿಧಿವಶರಾಗಿ ಒಂದು ವರ್ಷದ ಬಳಿಕ ಮಾಳವಿಕಾ ಹೆಗ್ಡೆ ಅವರನ್ನು ಸಿಇಓ ಆಗಿ ನೇಮಕ ಮಾಡಲಾಗಿದೆ.