ರಾಜ್ಯದಲ್ಲಿ ಜ.1ರಿಂದ ಶಾಲೆ ಆರಂಭ ಖಚಿತ-ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ…

121
firstsuddi

ಬೆಂಗಳೂರು : ಈಗಾಗಲೇ ನಿರ್ಧರಿಸಿದಂತೆ ಜನವರಿ 1ರಿಂದ ಶಾಲೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಕೊರೊನಾ ರೂಪಾಂತರ ವೈರಸ್ ಬಗ್ಗೆ ತಜ್ಷರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕೊರೊನಾ ರೂಪಾಂತರಿ ವೈರಸ್ ಹರಡುತ್ತಿರುವ ನಡುವೆ ಶಾಲೆ ಆರಂಭಿಸುವ ಕುರಿತು ತಜ್ಞರೊಂದಿಗೆ ಮಾತನಾಡಿದ್ದೇನೆ ಈ ವೈರಸ್ ಬಗ್ಗೆ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಹೆಚ್ಚು ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ ಕೊರೊನಾ ನಿಯಂತ್ರಣ ಕ್ರಮಗಳನ್ನು ಎಲ್ಲರು ಪಾಲಿಸಬೇಕು. ಒಂದು ತರಗತಿಯಲ್ಲಿ ಕೇವಲ 15 ಮಕ್ಕಳಿಗೆ ಮಾತ್ರ ಪಾಠ ಮಾಡಲು ಅವಕಾಶ. ನಮ್ಮ ಈ ಮುಂದಿನ ಹೆಜ್ಜೆಗೆ ಗ್ರಾಮೀಣಾಭಿವೃದ್ಧಿ ಆರೋಗ್ಯ ಸಾರಿಗೆ ಇಲಾಖೆಗಳು ಸಹಕರಿಸಬೇಕು. ಅಲ್ಲದೇ ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಬರೆದು ಸಹಿ ಮಾಡಿಕೊಡಬೇಕು. ಮಕ್ಕಳು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಆಗಮಿಸಬೇಕು. ಇಲ್ಲದಿದ್ದರೆ ಅವರಿಗೆ ತರಗತಿಗೆ ಪ್ರವೇಶ ಇರುವುದಿಲ್ಲ. ಶಾಲೆ ಆರಂಭವಾದ ಒಂದು ವಾರದ ಬಳಿಕ ಸಿಲಬಸ್ ಹಾಗೂ ಪರೀಕ್ಷೆಯ ದಿನಾಂಕವನ್ನು ಪ್ರಕಟಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.