ಮೂಡಿಗೆರೆ : ಬಣಕಲ್‍ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20 ನೇ ಸಾಲಿನಲ್ಲಿ 19.03 ಲಕ್ಷ ಲಾಭ ಗಳಿಸಿದೆ : ರಂಗನಾಥ್.

213
firstsuddi

ಕೊಟ್ಟಿಗೆಹಾರ : ಬಣಕಲ್‍ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20 ನೇ ಸಾಲಿನಲ್ಲಿ 19.03 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಉಪಾಧ್ಯಕ್ಷ ರಂಗನಾಥ್ ಹೇಳಿದರು.
ಬಣಕಲ್‍ನಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಿದ್ದು ಈಗ ರೂ 78.13 ಲಕ್ಷಗಳ ಸಾಲ ಬಾಕಿ ಇದ್ದು ಈ ಎಲ್ಲದರ ಅಂಕಿ ಅಂಶದ ಪ್ರಕಾರ ಸ್ವ ಸಹಾಯ ಸಂಘದ ಪ್ರಗತಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಅನೇಕ ಸಂಸ್ಥೆಗಳು ಸಿಲುಕಿದವು. ಹೊಸ ಆಡಳಿತ ಮಂಡಳಿ ರಚನೆಯಾದ ನಂತರ ಸಂಘವೂ ಅತಿ ಹೆಚ್ಚಿನ ವ್ಯವಹಾರ ನಡೆಸಿ ಸುಮಾರು 2.50 ಕೋಟಿಯಷ್ಟು ಠೇವಣಿಯನ್ನು ಹೆಚ್ಚಿಸಿ ಕೊಂಡಿದೆ ಎಂದರು.
ಜಿಲ್ಲಾ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಅವರು ಮಾತನಾಡಿ, ಸಹಕಾರ ಸಂಘಗಳ ಮೂಲಕ ರೈತರ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ರೈತ ಬಾಂಧವರು ಸಹಕಾರ ಸಂಘದೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕಿದೆ ಎಂದರು.
ಸಂಘದ ನಿರ್ದೇಶಕ ಟಿ.ಎಂ ಗಜೇಂದ್ರ ಅವರು ಮಾತನಾಡಿ ಈ ವರ್ಷ ಕೊರೋನಾ ಮಹಾಮಾರಿಯಿಂದ ಜಗತ್ತಿನಲ್ಲಿ ಆರ್ಥಿಕ ಸಂಕಷ್ಟ ಉದ್ಬವಿಸಿತ್ತು. ಈ ಸಂದರ್ಭದಲ್ಲಿ ಸಂಘವು ಕೂಡ ಹೊಸ ಮಾರ್ಗ ಸೂಚಿಯೊಂದಿಗೆ ವ್ಯವಹಾರವನ್ನು ನಡೆಸಿ ಅತ್ಯುತ್ತಮ ಸಾಧನೆ ಮಾಡಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ.ಎಸ್ ಕಲ್ಲೇಶ್, ಎ.ಆರ್ ಅಭಿಲಾಷ್, ಬಿ.ಎಸ್ ವಿಕ್ರಂ, ಶಾಮಣ್ಣ ಬಣಕಲ್, ಜಿ.ಬಿ ಲಕ್ಷ್ಮಿ, ದಿಲ್‍ದಾರ್ ಬೇಗಂ, ಹೆಚ್ಚ.ಕೆ ಮಮತ, ಬಿ.ಆರ್ ಚಂದ್ರಶೇಖರ್, ಕೆ.ಕಿ ರಮೇಶ್, ಬಿ.ಎಸ್.ನಾರಾಯಣಗೌಡ, ಬಿ.ಎ ಪ್ರದೀಪ್ ಕುಮಾರ್, ಹೆಚ್.ಬಿ ಚಂದ್ರಶೇಖರ್, ಕಾರ್ಯ ನಿರ್ವಾಹಣಾಧಿಕಾರಿ ನಿಶಾಂತ್ ಮಾಜಿ ಅಧ್ಯಕ್ಷ ಕೃಷ್ಣೆಗೌಡ, ಶಿವರಾಮಶೆಟ್ಟಿ ಮುಂತಾದವರು ಇದ್ದರು.