ಮೂಡಿಗೆರೆ : ನಾಳೆ ಸಂಜೆ 5 ಗಂಟೆಗೆ ತೇಜಸ್ವಿ ಓದು ಕಾರ್ಯಕ್ರಮ…

137
firstsuddi

ಕೊಟ್ಟಿಗೆಹಾರ : ನಾಳೆ ಸಂಜೆ 5 ಗಂಟೆಗೆ ತೇಜಸ್ವಿ ಓದು ಕಾರ್ಯಕ್ರಮ ಸಾಮಾಜಿಕ ಜಾಲತಾಣದ ನೇರಪ್ರಸಾರದಲ್ಲಿ ನಡೆಯಲಿದೆ.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಓದು ನೇರಪ್ರಸಾರ ನಡೆಯಲಿದ್ದು, ಹಾಸನದ ಕನ್ನಡ ಉಪನ್ಯಾಸಕರಾದ ರೋಹಿತ್ ಅಗಸರಹಳ್ಳಿ ಅವರು ತೇಜಸ್ವಿ ಅವರ ಪರಿಸರದ ಕಥೆ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
ಕಾರ್ಯಕ್ರಮವೂ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂ, ಯೂಟ್ಯೂಬ್‍ನ ಅಧಿಕೃತ ಫೇಜ್‍ನಲ್ಲಿ ನೇರಪ್ರಸಾರವಾಗಲಿದೆ. www.facebook.com/kpptrust, www.youtube.com/kpptrust, www.instagram.com/kpptrust ಮೂಲಕ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9663098873 ಗೆ ಸಂಪರ್ಕಿಸಬಹುದಾಗಿದೆ.