ಕೋಲಾರ : ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲಗ ರಸ್ತೆಯ ಹರಿಪುರ ಗೇಟ್ ಬಳಿ ನಡೆದಿದೆ. ಮೃತರನ್ನು ಪ್ರವೀಣ್ (9), ಟೇಕಲ್‍ನ ಅನಿಲ್(24), ಹಾಗೂ ಮುನಿರಾಜು (35) ಎಂದು ಗುರುತಿಸಲಾಗಿದೆ. ಮಾಲೂರು ಪಟ್ಟಣದಿಂದ ಟೇಕಲ್‍ಗೆ ಹೊರಟ್ಟಿದ್ದ ಬೈಕ್ ಹಾಗೂ ಕುಪ್ಪಂನಿಂದ ಮಾಲೂರಿಗೆ ಹೊರಟ್ಟಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಾಲೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










