ಬಡವರು ಹಾಗೂ ನಿರ್ಗತಿಕರ ಬಾಳಿಗೆ ಬೆಳಕಾಗಿದ್ದ ನಟ ಸೋನು ಸೂದ್ ಅವರ ವಿರುದ್ಧ ಎಫ್‍ಐಆರ್ ದಾಖಲು…

167
firstsuddi

ಮುಂಬೈ : ಸಂಕಷ್ಟದ ಸಮಯದಲ್ಲಿ ಬಡವರು ಹಾಗೂ ನಿರ್ಗತಿಕರ ಬಾಳಿಗೆ ಬೆಳಕಾಗಿದ್ದ ಬಾಲಿವುಡ್ ನಟ ಸೋನು ಸೂದ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನಟ ಸೋನು ಸೂದ್ ಅವರು ಅನುಮತಿ ಪಡೆಯದೇ ಮುಂಬೈನಲ್ಲಿ ಇರುವ ತಮ್ಮ ಬಹುಮಹಡಿಯ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ್ದು, ಈ ಹಿನ್ನೆಲೆ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸೋನು ಸೂದ್ ಅವರ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಧಿಕಾರಿಗಳ ದೂರು ದಾಖಲಿಸಿಕೊಂಡ ಪೊಲೀಸರು ಸೋನು ಸೂದ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.