ಮೂಢನಂಬಿಕೆಯ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ ಬಂಧನ…

111
firstsuddi

ಮದನಪಲ್ಲೆ(ಆಂಧ್ರ ಪ್ರದೇಶ): ಮೂಢನಂಬಿಕೆ ಹೆಸರಿನಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ಮದನಪಲ್ಲೆ ನಗರದ ಹೊರವಲಯದಲ್ಲಿರುವ ಶಿವ ನಗರದ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್‍ನಲ್ಲಿ ನಡೆದಿದೆ. ದಂಪತಿಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಅವರು ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭವಾಗುತ್ತದೆ, ಆಗ ತಮ್ಮ ಇಬ್ಬರು ಹೆಣ್ಣು ಮಕ್ಕಳು ಪುನರ್ಜನ್ಮ ಪಡೆದು ಬರುತ್ತಾರೆ ಎಂಬ ದೈವ ಸಂದೇಶ ಬಂದಿದೆ ಎಂದು ಹೇಳಿ ತಮ್ಮಿಬ್ಬರು ಹೆಣ್ಣುಮಕ್ಕಳಾದ ಅಲೈಕ್ಯ (27) ಹಾಗೂ ಸಾಯಿ ದಿವ್ಯಾ (22) ಇಬ್ಬರನ್ನು ಮೂಡನಂಬಿಕೆಯ ಹೆಸರಿನಲ್ಲಿ ಬಲಿಕೊಟ್ಟಿದ್ದರು. ದಂಪತಿಗಳನ್ನು ಮದನಪಲ್ಲೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಆರೋಪಿಗಳಾದ ತಾಯಿ ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲರಾಗಿದ್ದು, ಹಾಗೂ ತಂದೆ ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.