ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಅರಣ್ಯದ ಜೇನುಕಲ್ಲು ಸಮೀಪ ಅರಣ್ಯದಲ್ಲಿ ಸೋಮವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸಿದರು.
ಚಾರ್ಮಾಡಿ ಘಾಟ್ ಅರಣ್ಯದ ಜೇನುಕಲ್ಲು ಸಮೀಪ ಹತ್ತಾರು ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚು ಆವರಿಸುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದರು.
ಅರಣ್ಯ ಇಲಾಖೆಯಿಂದ ಅರಣ್ಯ ಪ್ರದೇಶದ ಅಂಚಿನಲ್ಲಿ ಬೆಂಕಿ ರೇಖೆ ನಿರ್ಮಿಸದೇ ಇರುವುದರಿಂದ ಕಾಡ್ಗಿಚ್ಚು ವೇಗವಾಗಿ ಹರಡಲು ಕಾರಣವಾಗಿದ್ದು ಅರಣ್ಯ ಇಲಖೆ ಬೆಂಕಿ ರೇಖೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.










