ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಮೂರ್ತಿ ಪಿ. ಬಿ ಸಾವಂತ್ ಅವರು ನಿಧನ…

132
First Suddi

ಪುಣೆ(ಮಹಾರಾಷ್ಟ್ರ): ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಮೂರ್ತಿ ಪಿ. ಬಿ. ಸಾವಂತ್ ಅವರು ಹೃದಯಾಘಾತದಿಂದ ಇಂದು ಪುಣೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

91 ವರ್ಷ ವಯಸ್ಸಾಗಿದ್ದ ಸಾವಂತ್ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ತಮ್ಮ ನಿವಾಸ ಪುಣೆಯಲ್ಲಿ ನಿಧಾನರಾಗಿದ್ದಾರೆ. ಸಾವಂತ್ ಅವರ ನಿಧನಕ್ಕೆ ಹಲವು ವಕೀಲರು, ಕಾರ್ಯಕರ್ತರು ಹಾಗೂ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ ಬಾನೇರ್ ನಲ್ಲಿ  ನಡೆಸಲಾಗುವುದು.

ಜೂನ್ 30, 1930 ರಂದು ಜನಿಸಿದ್ದ ಪಿ.ಬಿ ಸಾವಂತ್ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ನಂತರ ಮುಂಬೈ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1973 ರಲ್ಲಿ ಮುಂಬೈ ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು 1989 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.