ಪುನೀತ್ ರಾಜ್ ಕುಮಾರ್ ಅವರು ಸಿನಿಮಾರಂಗಕ್ಕೆ ಬಂದು 45 ವರ್ಷ..!

132
Firstsuddi

ಬೆಂಗಳೂರು : ಬಾಲನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಎಲ್ಲರ ಪ್ರೀತಿಯ ಪವರ್ ಸ್ಟಾರ್ ಹಾಗೂ ಅಪ್ಪು ಆಗಿರುವ ಪುನೀತ್ ರಾಜ್ ಕುಮಾರ್ ಅವರು ಸಿನಿಮಾರಂಗಕ್ಕೆ ಬಂದು 45 ವರ್ಷ ಪೂರೈಸಿದ್ದಾರೆ.

45 ವರ್ಷಗಳ ಕಾಲ ಮನರಂಜನೆಯನ್ನು ನೀಡುತ್ತಾ ಬಂದಿರುವ ಅಪ್ಪು ಅವರಿಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸೆಲೆಬ್ರಿಟಿಗಳು, ಕಲಾವಿದರು, ಶುಭಾಶಯ ಕೋರಿದ್ದಾರೆ. ಶುಭಕೋರಿದ ಎಲ್ಲರಿಗೂ ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. 45 ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.