ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದ್ದಾರೆ.
ಮಧುಬಂಗಾರಪ್ಪನವರು ಕಳೆದ ಮೂರು ದಿನಗಳ ಹಿಂದೆ ಡಿಕೆಶಿ ಅವರನ್ನು ಭೇಟಿ ಮಾಡಿ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ತಮ್ಮೊಂದಿಗೆ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದ್ದರು. ಮಧು ಅವರ ಹೇಳಿಕೆ ಬೆನ್ನಲ್ಲೆ ಇದೀಗ ಡಿಕೆಶಿ ಅವರ ಮನೆಗೆ ಶಿವರಾಜ್ ಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರು ಇದು ನನ್ನ ಪರ್ಸನಲ್ ವಿಸಿಟ್ ಅಷ್ಟೇ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಕೆಶಿ ಅವರು ಮಾತನಾಡಿ, ಶಿವರಾಜ್ ಕುಮಾರ್ ಕುಟುಂಬ ನಮ್ಮ ಕುಟುಂಬ ತುಂಬಾ ಆತ್ಮೀಯವಾಗಿ ಇದ್ದೇವೆ. ಅವರು ಏನಕ್ಕೆ ಬಂದಿದ್ದರು, ಯಾವ ವಿಚಾರ ಮಾತಾಡಿದ್ವಿ ಅಂತಾ ಡಿಸ್ ಕ್ಲೋಸ್ ಮಾಡಲ್ಲ ಎಂದರು.










