ಸಿಡಿ ಪ್ರಕರಣ : ನನ್ನ ಕಕ್ಷಿದಾರ ನಿಜವಾಗಿಯೂ ಸಂತ್ರಸ್ತ : ವಕೀಲ ಶ್ಯಾಮ್ ಸುಂದರ್.

102
firstsuddi

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ಪರ ವಕೀ¯ರಾದ ಶ್ಯಾಮ್ ಸುಂದರ್ ಅವರು ಸಿಡಿ ಯುವತಿ ಇದೀಗ ತನಿಖೆ ದಾರಿ ತಪ್ಪಿಸಲು ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ. ನನ್ನ ಕಕ್ಷಿದಾರರ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಕಳೆದ ಬಾರಿ ವಿಚಾರಣೆಗೆ ಬರುವಂತೆ ಎಸ್‍ಐಟಿ ನೋಟಿಸ್ ನೀಡಿತ್ತು. ಆದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಬಳಿಕ ತನಿಖಾಧಿಕಾರಿಗಳು ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಕೊಟ್ಟರೆ ಖಂಡಿತವಾಗಿಯೂ ಬರುತ್ತಾರೆ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರ ನಿಜವಾಗಿಯೂ ಸಂತ್ರಸ್ತರು ಎಂದು ವಕೀಲ ಶ್ಯಾಮ್ ಸುಂದರ್ ಅವರು ಹೇಳಿದ್ದಾರೆ.