ಕಳಸ : ಎಂಸಿಎಲ್ 2021 ಕಪ್ ವಿನ್ನರ್ ಆಗಿ ಹೊರಹೊಮ್ಮಿದ ಕಳಸ ಪ್ರೆಂಡ್ಸ್ ಗೆ ಪ್ರಶಸ್ತಿ…

160
firstsuddi

ಕಳಸ : ಯುನೈಟೆಡ್ ಕ್ರಿಕೆಟರ್ಸ್ ಮಲ್ಲೇಶ್ವರ ಇವರ ವತಿಯಿಂದ ನಡೆದ ಎಂಸಿಎಲ್ 2021 ಕಪ್ ವಿನ್ನರ್ ಆಗಿ ಕಳಸ ಪ್ರೆಂಡ್ಸ್ ಹಾಗೂ ರನ್ನರ್ ಆಗಿ ಗೋಲ್ಡನ್ ವಾರಿಯರ್ಸ್ ಚನ್ನಡ್ಲು ಪ್ರಶಸ್ತಿ ಪಡೆದುಕೊಂಡರು.

ಕುದುರೆಮುಖದಲ್ಲಿ ನಡೆದ ಈ ಕ್ರಿಕೇಟ್ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಬಾಗವಹಿಸಿದ್ದವು. ಶುಕ್ರವಾರದಿಂದ ಮೂರು ದಿನಗಳ ಕಾಲ ಈ ಕ್ರಿಕೇಟ್ ಪಂದ್ಯಾವಳಿಯು ನಡೆದಿತ್ತು.

ನಿನ್ನೆ ನಡೆದ ಪೈನಲ್ ಪಂದ್ಯಾವಳಿಯಲ್ಲಿ ಗೋಲ್ಡನ್ ವಾರಿಯರ್ಸ್ ಚನ್ನಡ್ಲು ನಾಲ್ಕು ಒವರಿಗೆ 29 ರನ್ನ್‍ಗಳ ಕಲೆ ಹಾಕಿತ್ತು.ಇದನ್ನು ಬೆನ್ನಟ್ಟಿದ ಕಳಸ ಪ್ರೆಂಡ್ಸ್ ತಂಡವು ವಿಕೇಟ್ ನಷ್ಟವಿಲ್ಲದೆ ಮೂರು ಎಸೆತಗಳು ಬಾಕಿ ಇರುವಂತೆಯೆ ತನ್ನ ವಿಜಯದ ಮೆಟ್ಟಿಲು ಏರಿತ್ತು.
ಅಂತಿಮವಾಗಿ ಕಳಸ ಪ್ರೆಂಡ್ ಅಖರ್ಷಕ ಟ್ರೋಪಿ ಹಾಗೂ 50000 ಸಾವಿರ ನಗದನ್ನು ಪಡೆದುಕೊಂಡರೆ, ಗೋಲ್ಡನ್ ವಾರಿಯರ್ಸ್(ದ್ವಿ)ಟ್ರೋಫಿ ಮತ್ತು 30 ಸಾವಿರ ನಗದು,ರಿಯಲ್ ಪೈಟರ್(ತೃ) ಟ್ರೋಫಿ ಮತ್ತು 10 ಸಾವಿರ ನಗದನ್ನು ಪಡೆದುಕೊಂಡಿತು.ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಿಶಿರ ಪಡೆದುಕೊಂಡರು.

40 ವರ್ಷದ ಮೇಲ್ಪಟ್ಟವರಿಗೆ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮಲ್ನಾಡ್ ಟೈಗರ್ಸ್, ದ್ವಿತೀಯ ಸ್ಪೋರ್ಟಿಂಗ್ ಕ್ಲಬ್ ಕಳಸ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ತೇಜಸ್ ನೆಲ್ಲಿಬೀಡು, ಸಂಕೇತ್, ರಿತೇಶ್ ಇದ್ದರು.