ಕಾಡುಪ್ರಾಣಿ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಫೋಟ ; ಹಸುವಿನ ಬಾಯಿ ಛಿದ್ರ…

146
firstsuddi

ಕಾರವಾರ : ಕಾಡುಪ್ರಾಣಿಯ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಗೋವಿನ ಬಾಯಿ ಛಿದ್ರಗೊಂಡಿರುವ ಘಟನೆ ಮುಂಡಗೋಡ ತಾಲ್ಲೂಕಿನ ಸನವಳ್ಳಿ ಜಲಾಶಯದ ಬಳಿ ಸಂಭವಿಸಿದೆ.

ಮುಂಡಗೋಡದ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಹಸು ಇದಾಗಿದ್ದು, ಜಲಾಶಯದ ಹತ್ತಿರ ಮೇವು ತಿನ್ನಲು ಬಂದಿದೆ. ಈ ವೇಳೆ ನೆಲದಲ್ಲಿ ಕಾಡುಪ್ರಾಣಿ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ನ್ನು ಆಹಾರವೆಂದು ತಿನ್ನಲು ಮುಂದಾದಾಗ ಕೈಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಗೋವಿನ ಬಾಯಿ ಸಂಪೂರ್ಣವಾಗಿ ಛಿದ್ರಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಮತ್ತೊಂದು ಜೀವಂತ ಕೈಬಾಂಬ್ ನ್ನು ಪತ್ತೆ ಮಾಡಿದ್ದಾರೆ.

ಘಟನೆ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.