ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗದಿಂದ ಎರಡನೇ ನೋಟಿಸ್…

118
firstsuddi

ಕೊಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಎರಡನೇ ನೋಟಿಸ್ ನೀಡಿದೆ. ಸಿಆರ್ ಪಿಎಫ್ ಭದ್ರತಾ ಪಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ಮತದಾರರನ್ನು ಬೆದರಿಸುತ್ತಿದೆ ಎಂಬ ಹೇಳಿಕೆಗೆ ಸ್ಪಷ್ಟನೆ ಕೋರಿ ಏಪ್ರಿಲ್ 10ರೊಳಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ ಎರಡನೇ ನೋಟಿಸ್ ನೀಡಿದೆ.

ಇದಕ್ಕೂ ಮೊದಲು ಹೂಗ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸುವಾಗ, ಮುಸ್ಲಿಂ ಸಮುದಾಯದ ಮತಗಳು ಬೇರೆ ಪಕ್ಷಗಳ ನಡುವೆ ವಿಭಜನೆಗೆ ಅವಕಾಶ ನೀಡದಂತೆ ಮತದಾರರಲ್ಲಿ ಅವರು ಮನವಿ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು.