ದೆಹಲಿ : ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.

115
firstsuddi

ನವದೆಹಲಿ : ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಗುತ್ತಿದ್ದು, ಸೋಂಕಿಗೆ ನಿಯಂತ್ರಣ ಹಾಕಲು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಇಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅರವಿಂದ ಕೇಜ್ರಿವಾಲ್ ಅವರು, ನಾಳೆ(ಶುಕ್ರವಾರ) ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯದಲ್ಲಿ ರೆಸ್ಟೋರೆಂಟ್ ಹೋಟೆಲ್, ಜಿಮ್, ಮಾಲ್ ಕಡ್ಡಾಯವಾಗಿ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾ ಥೀಯೇಟರ್ ಗಳು ಕೂಡ ವಾರದ ಕೊನೆಯಲ್ಲಿ ಬಂದ್ ಆಗುತ್ತದೆ. ಅಗತ್ಯ ಸೇವೆಗಳನ್ನು ನೀಡುವವರಿಗೆ ಕರ್ಫ್ಯೂ ಪಾಸ್ ಗಳನ್ನು ನೀಡಲಾಗುತ್ತದೆ. ಸಭೆ-ಸಮಾರಂಭಕ್ಕೆ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಥೀಯೇಟರ್ ಗಳಲ್ಲಿ ಶೇ. 30 ರಷ್ಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಅತ್ಯವಶ್ಯಕ ಓಡಾಟಕಷ್ಟೇ ಅವಕಾಶ ನೀಡಲಾಗುತ್ತದೆ. ಇಂದು ಘೋಷಣೆಯಾಗಿರುವ ನಿರ್ಬಂಧಗಳು ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಅತ್ಯವಶ್ಯಕವಾಗಿದೆ. ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.