ವರನಿಗೆ ಕೋವಿಡ್, ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದ ಜೋಡಿ!

126
firstsuddi

ವರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಇಬ್ಬರೂ ಸಹ ಪಿಪಿಇ ಕಿಟ್ ಧರಿಸಿ ವಿವಾಹ ಆಗಿರುವ ಘಟನೆ ಮಧ್ಯಪ್ರದೇಶದ ರತ್ಲಾಂನಲ್ಲಿ ನಡೆದಿದೆ. ಮದುವೆಗೆ ಮೂಹರ್ತ ನಿಗದಿಯಾಗಿತ್ತು. ಆದರೆ ವರನಿಗೆ ಏಪ್ರೀಲ್.19 ರಂದು ಕೊರೊನಾ ಸೋಂಕು ತಗುಲಿದೆ. ಮದುವೆ ಮುಂದುಡಲಾಗದ ಕಾರಣ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಈ ಜೋಡಿ ವಿವಾಹವಾಗಿದೆ. ವಧು-ವರರಿಬ್ಬರು ಮುನ್ನೆಚ್ಚರಿಕೆವಹಿಸಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ವಧು-ವರ ಮದುವೆಯಾಗಿರುವ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.