ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್!

126
firstsuddi

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದಾ ಅವರ 27 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಸ್ವತಃ ಬಿಲ್ ಗೇಟ್ಸ್ ಅವರು ಟ್ವೀಟರ್ ನಲ್ಲಿ ಘೋಷಿಸಿದ್ದಾರೆ.

ನಾವು ಸಾಕಷ್ಟು ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. 27 ವರ್ಷಗಳಲ್ಲಿ ಮೂವರು ಮಕ್ಕಳನ್ನು ಬೆಳೆಸಿದ್ದೇವೆ, ಜೊತೆಗೆ ವಿಶ್ವದ ಜನರ ಆರೋಗ್ಯ ಮತ್ತು ಅವರ ಉತ್ತಮ ಜೀವನಕ್ಕಾಗಿ ಫೌಂಡೇಷನ್ ಕಟ್ಟಿದ್ದೇವೆ. ಫೌಂಡೇಷನ್ನಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ಇನ್ಮುಂದೆ ದಂಪತಿಯಾಗಿ ಒಟ್ಟಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ. ನಮಗೆ ನಮ್ಮ ಸ್ಪೇಸ್ ಬೇಕಿದೆ ಎಂದು ದಂಪತಿ ಟ್ವಿಟರ್ನಲ್ಲಿ ಜಂಟಿ ಹೇಳಿಕೆ ನೀಡಿದ್ದಾರೆ.