ಮೂಡಿಗೆರೆ : ತುಂಡಾಗಿ ಬಿದ್ದ ವಿದ್ಯುತ್ ತಂತಿ ; ತಪ್ಪಿದ ಭಾರೀ ಅನಾಹುತ…

236
firstsuddi

 ಕೊಟ್ಟಿಗೆಹಾರ : ಅತ್ತಿಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಪವರ್ ಲೈನ್‍ನ ವಿದ್ಯುತ್ ತಂತಿಯು ತುಂಡಾಗಿ ಬಿದ್ದು ಬೇಲಿ ಹೊತ್ತಿ ಉರಿದ ಘಟನೆ ಇಂದು ನಡೆದಿದೆ.

ಬಣಕಲ್‍ ನಿಂದ ಅತ್ತಿಗೆರೆ ಕಡೆಗೆ ಹಾದು ಹೋಗಿರುವ 11 ಸಾವಿರ ಕೆ.ವಿ.ಯ ವಿದ್ಯುತ್ ಮಾರ್ಗದ ವಿದ್ಯುತ್ ತಂತಿಯು ತುಂಡಾಗಿ ಬಿದ್ದು ಬೇಲಿ ಬೆಂಕಿ ಹತ್ತಿ ಉರಿಯ ತೊಡಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಮಂಜುನಾಥ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿಯನ್ನು ಸರಿಪಡಿಸಿದ್ದಾರೆ.