ಚಿಕ್ಕಮಗಳೂರು : ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಜಿಲ್ಲಾಡಳಿತ ಮೇ 24ರ ಬೆಳಗ್ಗೆ 6ರ ವರೆಗೂ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಆದರೂ ಜನರು ಕ್ಯಾರೇ ಎನ್ನದೆ ಅನಗತ್ಯವಾಗಿ ಓಡಾಟ ನಡೆಸಿದ್ದಾರೆ. ಇದನ್ನು ನಿಯಂತ್ರಿಸಲು ತರೀಕೆರೆ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿ, ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ಬೇಕಾಬಿಟ್ಟಿ ರಸ್ತೆಗಿಳಿಯುವ ಜನರನ್ನು ಮತ್ತು ಹೆಚ್ಚು ಓಡಾಟ ಮಾಡಿದವರನ್ನು ಮುಕ್ತಿ ವಾಹನದಲ್ಲಿ ಕೂರಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ತರೀಕೆರೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.ಇದರಿಂದ ಭಯಭೀತರಾದ ಜನ ಆಂಬ್ಯುಲೆನ್ಸ್ ಹಾಗೂ ಪಿಪಿಇ ಕಿಟ್ ಧರಿಸಿರೋ ಸಿಬ್ಬಂದಿಯನ್ನು ನೋಡಿ ಪರಾರಿಯಾಗುತ್ತಿದ್ದಾರೆ.










