ಬೆಂಗಳೂರಿನ ಐದು ಸಾವಿರ ಜನರಿಗೆ ಪ್ರತಿ ನಿತ್ಯ ಆಹಾರ ವಿತರಣೆ ಮಾಡುತ್ತಿರುವ ಸೋನು ಸೂದ್..!

122
firstsuddi

ಬೆಂಗಳೂರು : ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ಸಹಾಯಕ್ಕೆ ಬಾಲಿವುಡ್ ನಟ ಸೋನು ಸೂದ್ ಅವರು ಮುಂದಾಗಿದ್ದಾರೆ. ದೇಶದಾತ್ಯಂತ ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಇದೀಗ ನಗರಕ್ಕೆ ಪ್ರತಿನಿತ್ಯ ಐದು ಸಾವಿರ ಜನರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸೂದ್ ಚಾರಿಟಿ ಫೌಂಡೇಷನ್ ನಿಂದ ಫುಡ್ ಫ್ರಮ್ ಸೂದ್ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ಕೆ ಬೀಜಿಂಗ್ ಬೈಟ್ಸ್ ರೆಸ್ಟೊರೆಂಟ್ ಮಾಲೀಕ ಇಬ್ರಾಹಿಂ ಹಾಗೂ ಕರ್ನಾಟಕದ ರಾಜ್ಯ ರೈಲ್ವೇ ಪೊಲೀಸರು ಕೂಡ ಕೈ ಜೋಡಿಸಿದ್ದಾರೆ. ಪ್ರತಿ ದಿನ 5,000ಕ್ಕೂ ಅಧಿಕ ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ನಗರದ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್, ವೆಂಟಿಲೇಟರ್ ಗಳನ್ನು ಉಚಿತವಾಗಿ ಒದಗಿಸಿದ್ದರು. ಆಪತ್ತಿನ ಕಾಲದಲ್ಲಿ ರಿಯಲ್ ಹೀರೋ ಕಡೆಯಿಂದ ಸಿಕ್ಕ ನೆರವಿನಿಂದಾಗಿ ಅನೇಕರ ಜೀವ ಉಳಿದಿದೆ.