ಕೊರೊನಾ ಬಾರದಿರಲು ಜೀವಂತ ಹಾವನ್ನು ತಿಂದ ಭೂಪ!

87
firstsuddi

ಚೆನ್ನೈ : ಕೊರೊನಾ ಸೋಂಕು ಬಾರದಿರಲು ವ್ಯಕ್ತಿಯೋರ್ವ ಜೀವಂತ ಹಾವನ್ನು ತಿಂದು ಹುಚ್ಚಾಟ ಮೆರೆದಿದ್ದಾನೆ.

ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬ ರೈತ ಜೀವಂತ ಹಾವೊಂದನ್ನು ಕೈಯಲ್ಲಿ ಹಿಡಿದು ಬಾಯಿಯಿಂದ ಕಚ್ಚಿ ತಿಂದಿದ್ದಾನೆ. ಅಲ್ಲದೇ ತಾನು ಹಾವು ತಿನ್ನುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಇದು ಕೊರೊನಾಗೆ ಅಪರೂಪದ ಔಷಧಿಯಾಗಿದೆ ಎಂದು ಹೇಳಿದ್ದಾನೆ.

ಹಾವು ತಿನ್ನುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಪರಿಸದ ಪ್ರೇಮಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ವಡಿವೇಲ್ ನನ್ನು ಬಂಧಿಸಿದ್ದಾರೆ.