ಕಲಬುರುಗಿ : ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜೂನ್ 8ರ ರಾತ್ರಿ ಖಾಸಗಿ ಆ್ಯಂಬುಲನ್ಸ್ ಚಾಲಕ ಪಿಂಟು ಎಂಬಾತ ಯುವತಿ ಮಲಗಿದ್ದಾಗ ಆಕೆಯ ಡೈಪರ್ ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ತಕ್ಷಣ ಎಚ್ಚರಗೊಂಡ ಯುವತಿ ಚಿರಾಡಿದ ಬಳಿಕ ಕಾಮುಕ ಅಲ್ಲಿಂದ ಪರಾರಿಯಾಗಿದ್ದ. ಘಟನೆ ಬಳಿಕ ಬ್ರಹ್ಮಪುರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಘಟನೆ ನಂತರ ಮಾನಸಿಕವಾಗಿ ಮತ್ತಷ್ಟು ನೊಂದಿದ್ದ ಯುವತಿಗೆ ಕೋವಿಡ್ ಚಿಕಿತ್ಸೆ ಮುಂದುವರೆಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.










