ಹುಬ್ಬಳ್ಳಿ : ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ…

109
firstsuddi

ಹುಬ್ಬಳ್ಳಿ : ಕಿಮ್ಸ್ ಆಸ್ಪತ್ರೆಯಲ್ಲಿ ಒಂದು ಕಾಲಿನ ಮಗು ಜನನವಾಗಿದೆ. ಮಗುವಿನ ಭಾವಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ನಿನ್ನೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ ಕೆಲವೇ ಗಂಟೆಗಳಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಗುವನ್ನು ನೋಡಿದಾಗ ಕೇವಲ ಒಂದು ಕಾಲು ಮಾತ್ರ ಕಾಣಿಸಿಕೊಂಡಿದ್ದು, ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲವಾಗಿವೆ. ಮಗು ವಿಚಿತ್ರ ಅಂಗಾಂಗ ಹೊಂದಿರುವುದು ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ.

ಅನುವಂಶೀಯ ಕಾರಣದಿಂದ ವಿಚಿತ್ರ ಮಗು ಜನನವಾಗಿದೆ ಎಂದು ಕಿಮ್ಸ್ ವೈದ್ಯರು ಹೇಳುತ್ತಿದ್ದಾರೆ.