ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವು ನನ್ನ ಬಗ್ಗೆ ಏನೂ ಯೋಚಿಸ್ತೀರಿ? : ಅನುರಾಗ್ ಕಶ್ಯಪ್ ಗೆ ಪುತ್ರಿ ಪ್ರಶ್ನೆ…

137
firstsuddi

ಮುಂಬೈ : ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವು ನನ್ನ ಬಗ್ಗೆ ಏನೂ ಯೋಚನೆ ಮಾಡ್ತೀರಾ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಅವರ ಪುತ್ರಿ ಆಲಿಯಾ ಪ್ರಶ್ನೆ ಕೇಳಿದ್ದಾಳೆ.

ಆಲಿಯಾ ತಂದೆಯನ್ನು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾಳೆ. ಅದರಲ್ಲಿ ನಾನು ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಅನುರಾಗ್ ಕಶ್ಯಪ್ ಅವರು ಇದೆಂತಹ ಪ್ರಶ್ನೆ ಅಂತ ಕೇಳುತ್ತೀಯಾ? 80ರ ದಶಕದಲ್ಲಿ ನಾವು ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಈ ಪ್ರಶ್ನೆ ಬಿಟ್ಟು ಮುಂದೆ ಹೋಗೋಣ. ಅಲ್ಲದೆ, ಈಗಿನ ಪರಿಸ್ಥಿತಿಯಲ್ಲಿ ಈ ಪ್ರಶ್ನೆ ದೊಡ್ಡ ಮಹತ್ವವಿಲ್ಲ ಎಂದು ಉತ್ತರಿಸಿದ್ದಾರೆ.

ಅನುರಾಗ್ ಕಶ್ಯಪ್ ಅವರು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.