ಎಸ್.ಎಸ್.ಎಲ್.ಸಿ ಎಕ್ಸಾಂ ಬರೆಯುತ್ತಿದ್ದಾರೆ 55 ವರ್ಷದ ವೃದ್ಧ!

86
firstsuddi

ಕೋಲಾರ : ಕೊರೊನಾ ಆತಂಕದ ನಡುವೆಯೂ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಈ ನಡುವೆಯೂ 55 ವರ್ಷದ ವೃದ್ಧರೊಬ್ಬರು ಪರೀಕ್ಷೆ ಬರೆಯಲು ಬಂದಿದ್ದಾರೆ. ಕುರುಬರ ಪೇಟೆ ನಿವಾಸಿಯಾದ 55 ವರ್ಷದ ಮಂಜುನಾಥ್ ಅವರು ನಗರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು 10ನೇ ತರಗತಿ ಪಾಸ್ ಮಾಡಿದ್ರೆ ಪ್ರಮೋಷನ್ ಸಿಗುವ ಹಿನ್ನಲೆ ಪರೀಕ್ಷೆ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.