ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕಿಗೆ ಬಿದ್ದು ಬಾಲಕ ಸಾವು…

83
firstsuddi

ಹಾವೇರಿ : ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ನವನಗರ ಬಡಾವಣೆಯಲ್ಲಿ ನಡೆದಿದ್ದು, ಮೃತ ಬಾಲಕನನ್ನು ಚರಣ್ ವಿಭೂತಿ ಎಂದು ಗುರುತಿಸಲಾಗಿದೆ.

ನಿನ್ನೆ ಚರಣ್ ಎಂದಿನಂತೆ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ತೆರೆದ ನೀರಿನ ಟ್ಯಾಂಕಿಗೆ ಬಿದ್ದಿದ್ದಾನೆ. ಬಾಲಕ ಟ್ಯಾಂಕಿಗೆ ಬಿದ್ದಿರುವುದನ್ನು ಯಾರೂ ಗಮನಿಸದ ಕಾರಣ ಅಲ್ಲೇ ಸಾವನ್ನಪ್ಪಿದ್ದಾನೆ. ಬಾಲಕ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.