ಯಾರಾದರೂ ಉಪವಾಸ ಮಾಡಲಿ, ಯಾರಾದರೂ ಊಟಮಾಡಲಿ.. ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇವೆ : ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ತಿರುಗೇಟು…

68
firstsuddi

ನವದೆಹಲಿ : ಮೇಕೆದಾಟು ಯೋಜನೆ ವಿರೋಧಿಸಿ ಆಗಸ್ಟ್ 5ಕ್ಕೆ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೆ ನೀಡಿದ್ದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಇಂದು ದೆಹಲಿಯಲ್ಲಿ ಮಾತನಾಡಿದ ಅವರು, ಯಾರಾದರೂ ಉಪವಾಸ ಮಾಡಲಿ, ಯಾರಾದರೂ ಊಟಮಾಡಲಿ. ಮೇಕೆದಾಟು ಮೇಲೆ ನಮ್ಮ ಹಕ್ಕಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಲಾಗಿದ್ದು, ಡಿಪಿಆರ್ ಗೆ ಅನುಮೋದನೆ ಪಡೆದು ಈ ಯೋಜನೆ ಮಾಡಿಯೇ ತೀರುತ್ತೇವೆ ಎಂದು ಬೊಮ್ಮಯಿ ಸ್ಪಷ್ಟಪಡಿಸಿದ್ದಾರೆ.