ಸೆಮಿಫೈನಲ್ ನಲ್ಲಿ ಪುರುಷರ ಹಾಕಿ ಟೀಂಗೆ ಸೋಲು – ಕಂಚಿನ ಪದಕಕ್ಕೆ ಸೆಣಸಾಟ…

118
firstsuddi

ಟೋಕಿಯೋ : ಇಂದು ನಡೆದ ಒಲಿಂಪಿಕ್ಸ್ ಪುರುಷರ ಹಾಕಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲನ್ನು ಅನುಭವಿಸಿದೆ.
ಬೆಲ್ಜಿಯಂ ವಿರುದ್ಧ ಭಾರತ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿದ್ದು, ಟೀಂ ಇಂಡಿಯಾ ಕಂಚಿನ ಪದಕಕ್ಕಾಗಿ ಆಡಲಿದೆ.

ಪಂದ್ಯ ಮುಕ್ತಾಯ ನಂತರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಸೋಲು-ಗೆಲುವು ಜೀವನದ ಭಾಗ. ನಮ್ಮ ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯಕ್ಕೆ ಮತ್ತು ಭವಿಷ್ಯದ ಅಭಿಯಾನಕ್ಕೆ ತಂಡಕ್ಕೆ ಶುಭಾಶಯಗಳು, ನಮ್ಮ ಆಟಗಾರರ ಬಗ್ಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.