ಟೋಕಿಯೋ : ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದ್ದು, ಕಂಚಿನ ಪದಕ ಗೆದ್ದಿದ್ದಾರೆ.
ಟರ್ಕಿಯ ಬುಸೆನಾಜ್ ಸುರ್ಮನೆಲಿ ಅವರ ವಿರುದ್ಧ 64-69 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ನಲ್ಲಿ ಸ್ಪರ್ಧಿಸಿದ್ದ ಲವ್ಲಿನಾ 0-5 ಅಂತರದಿಂದ ಸೋತಿದ್ದಾರೆ. ಇದರಿಂದ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಲವ್ಲಿನಾ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ. ವಿಜೇಂದರ್ ಸಿಂಗ್ (2008) ಮತ್ತು ಮೇರಿ ಕೋಮ್ (2012) ಮೊದಲಿಗರು.










