ಟೋಕಿಯೋ : ಭಾರತೀಯ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಭಾರತಕ್ಕೆ ಕಂಚಿನ ಪದಕ ಕೈತಪ್ಪಿದೆ.
ಇಂದು ಬೆಳಗ್ಗೆ ನಡೆದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ 4-3 ಅಂತರದಲ್ಲಿ ಸೋಲು ಅನುಭವಿಸಿದೆ. ಮೊದಲಿಗೆ ಎರಡು ಗೋಲ್ ಗಳನ್ನು ಗ್ರೇಟ್ ಬ್ರಿಟನ್ ತಂಡ ದಾಖಲಿಸಿದಾಗ ನಿರಾಸೆಗೊಳಗಾಗಿದ್ದ ಭಾರತೀಯ ಮಹಿಳಾ ತಂಡ ಮಿಂಚಿನ ವೇಗದಲ್ಲಿ ಮೂರು ಗೋಲುಗಳನ್ನು ದಾಖಲಿಸಿ ಪದಕದ ಭರವಸೆ ಸೃಷ್ಟಿಸಿತ್ತು. ಆದರೆ ಪಂದ್ಯದ ಅಂತ್ಯಕ್ಕೆ 4-3 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.










