ಇಡಿ ದಾಳಿ ಬಳಿಕ ಜಮೀರ್ ಅಹ್ಮದ್ ಮೊದಲ ಪ್ರತಿಕ್ರಿಯೆ…

101
firstsuddi

ಬೆಂಗಳೂರು : ಇಡಿ ಅಧಿಕಾರಿಗಳ ದಾಳಿ ಬಳಿಕ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ಯಾವಾಗ ಮನೆ ಕಟ್ಟಿದ್ದೀರಿ, ಯಾವಾಗ ಖರೀದಿಸಿದ್ದೀರಿ. ಮನೆ ನಿರ್ಮಾಣಕ್ಕೆ ಮಾಡಿದ ವೆಚ್ಚದ ಬಗ್ಗೆ ಅಧಿಕಾರಿಗಳು ಮಾಹಿತಿ ಕೇಳಿದ್ರು. ಮನೆ ಕಟ್ಟಲು 7 ವರ್ಷ ಆಗಿದೆ. 2006 ರಲ್ಲಿ ನಾನು ಈ ಜಾಗ ಖರೀದಿಸಿದ ದಾಖಲೆಗಳು ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಿದ್ದೇನೆ. ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸಮಾಧಾನ ಆಗಿ ನಾವು ಕರೆದಾಗ ಬರಬೇಕು ಅಂತ ಹೇಳಿ ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಬರುವಂತೆ ಯಾವುದೇ ನೋಟಿಸ್ ನೀಡಿಲ್ಲ. ನನ್ನ ಎಲ್ಲಾ ಸ್ತಿ ಬಡವರ ಬಳಿಯೇ ಇದೆ. ನಾನು ಲೂಟಿ ಮಾಡಿಲ್ಲ. ಅಭಿಮಾನಿಗಳೇ ನನ್ನ ಆಸ್ತಿ ಎಂದರು.

3-4 ದೂರು ಬಂದಿತ್ತಂತೆ. ನನ್ನ ವ್ಯವಹಾರ ಎಲ್ಲ ವೈಟ್ ಅಮೌಂಟ್ ಎಂದಿದ್ದಾರೆ. ಎಲ್ಲರದ್ದೂ ನನ್ನ ಮೇಲೆಯೇ ಕಣ್ಣು. ಐಎಂಎ ಬಗ್ಗೆ ಚರ್ಚೆಯೇ ಆಗಿಲ್ಲ. ಇನ್ನು ನನ್ನ ಸಹೋದರರ ಮನೆಗೆ ಸಹ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಮಾಹಿತಿ ನೀಡಿದ ನಂತರ ಅಲ್ಲಿಂದ ತೆರಳಿದ್ದಾರೆ ಎಂದರು.